ReplyForward Add reaction |
ಉರ್ವಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾತಂತ್ರೋತ್ಸವ
ಆಗಸ್ಟ್ 15 ಗುರುವಾರ: ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆ ಉರ್ವಾ ಮತ್ತು ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ 78 ನೇ ಸ್ವಾತಂತ್ರ ದಿನಾಚರಣೆಯನ್ನು ಉರ್ವಾ ಮೈದಾನದಲ್ಲಿ ಮಹತ್ವಪೂರ್ಣವಾಗಿ ಆಚರಿಸಲಾಯಿತು. ಕಮಾಂಡರ್ ರೋಮಿಯೋ ವಾಸ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣ ನೆರವೇರಿಸಿ, ದೇಶವು ಇಂದು ಭಯೋತ್ಪಾದನೆಯಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಅದಕ್ಕಾಗಿ ನಾವು ಭಾರತೀಯರೆಲ್ಲಾ ಒಗ್ಗಟ್ಟಾಗಿ ದೇಶವನ್ನು ರಕ್ಷಿಸಲು ಪಣ ತೊಡಬೇಕಾಗಿದೆ ಎಂದು ತಮ್ಮ ಬಾಷಣದಲ್ಲಿ ತಿಳಿಸಿದರು.
ಪೊಂಪೈ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸಂತೋಷ್ ಸ್ವಾತಂತ್ರ ದಿನದ ಮಹತ್ವವನ್ನು ತಿಳಿಸಿಕೊಟ್ಟರು. ಶಾಲಾ ಸಂಚಾಲಕರು ಹಾಗೂ ಉರ್ವಾ ಇಮ್ಯಾಕ್ಯುಲೇಟ್ ಚರ್ಚ್‌ನ ಧರ್ಮ ಗುರುಗಳಾಗಿರುವ ವಂ. ಗುರು ಬೆಂಜಮಿನ್ ಪಿಂಟೋ, ಚರ್ಚ್‌ನ ಸಹಾಯಕ ಧರ್ಮ ಗುರುಗಳಾದ ವಂ. ಗುರು ಲ್ಯಾನ್ಸನ್ ಪಿಂಟೋ, ಚರ್ಚ್‌ನ ಆಡಳಿತ ಮಂಡಳಿ ಮತ್ತು ಪಾಲನಾ ಸಮಿತಿ ಸದಸ್ಯರು, ಶಾಲಾ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರು ಮತ್ತು ಸದಸ್ಯರು, ವಿದ್ಯಾರ್ಥಿಗಳು ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ಹೆತ್ತವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
2023- 24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗರಿಷ್ಟ ಅಂಕ ಪಡೆದು ಶೈಕ್ಷಣಿಕ ಸಾಧನೆ ಮಾಡಿದ ಇಬ್ಬರು ವಿದ್ಯಾರ್ಥಿಗಳನ್ನು ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ರಾಷ್ಟçಮಟ್ಟವನ್ನು ಪ್ರತಿನಿಧಿಸಿದ 6 ಜನ ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು. ನೃತ್ಯವಿದ್ವಾನ್ ಪ್ರಮೋದ್ ಉಳ್ಳಾಲ್‌ರವರ, ನಿರ‍್ದೇಶನದಲ್ಲಿಆಕರ್ಷಕ ನೃತ್ಯ ಕವಾಯತ್ತನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಪೊಂಪೈ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಐಸಿ ಮರಿಯ ಡಿಸೋಜರವರು ಅತಿಥಿಗಳನ್ನು ಸ್ವಾಗತಿಸಿದರು. ಸಂತ ಅಲೋಶಿಯಸ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶೀಮತಿ ಫ್ಲೇವಿ ಡಿಸೋಜರವರು ವಂದಿಸಿದರು. ಸಹ ಶಿಕ್ಷಕಿ ರೋಜ್ ಡಿಸೋಜರವರು ಕಾರ‍್ಯಕ್ರಮ ನಿರೂಪಿಸಿದರು ಸಿಹಿ ತಿಂಡಿ ವಿತರಣೆಯೊಂದಿಗೆ ಕಾರ‍್ಯಕ್ರಮ ಮುಕ್ತಾಯವಾಯಿತು